ಕಾಲೊರಾಡೋ ಮರುಭೂಮಿ

ಆಗ್ನೇಯ ಕ್ಯಾಲಿಫೋರ್ನಿಯ ವಾಯುವ್ಯ ಮೆಕ್ಸಿಕೋಪ್ರದೇಶದಲ್ಲಿ ಕ್ಯಾಲಿಫೋರ್ನಿಯ ಕೊಲ್ಲಿಯ ದಕ್ಷಿಣ ಭಾಗದಲ್ಲಿರುವ ಬೆಂಗಾಡು ಪ್ರದೇಶ. ಇದರಲ್ಲಿ ಸಾಲ್ಟನ್ ಸಿರಿಕ್ ತಗ್ಗುನೆಲವೂ (ಸಮುದ್ರ ಮಟ್ಟದಿಂದ 235' ಕೆಳಗಿದೆ) ಸೇರಿದೆ: ಉತ್ತರ ಮತ್ತು ಈಶಾನ್ಯ ದಿಕ್ಕುಗಳಲ್ಲಿರುವ ಮೊಹಾವೆ ಮರುಭೂಮಿಯಿಂದ ಇದನ್ನು ಸ್ಯಾನ್‍ಬರ್ನಡೀನೋ, ಕಾಟನ್‍ವುಡ್, ಚುಕಾವಾಲಾ ಮತ್ತು ಚಾಕೋಲೇಟ್ ಪರ್ವತಗಳು ಪ್ರತ್ಯೇಕಿಸಿವೆ. ಪಶ್ಚಿಮದಲ್ಲಿ ಪರ್ಯಾಯ ದ್ವೀಪ ಪರ್ವತಶ್ರೇಣಿ ಇದರ ಎಲ್ಲೆ. ಇದರ ಉದ್ದ 164 ಮೈ, ಅಗಲ 98 ಮೈ. ವಾಯುವ್ಯ ಭಾಗದಲ್ಲಿ ಚಲಿಸುವ ಮರಳು ದಿಬ್ಬಗಳೂ ಪೂರ್ವಭಾಗದಲ್ಲಿ ಅಲ್ಗೊಡೋನ್ಸ್ ಮರಳು ದಿಬ್ಬಗಳೂ ಇವೆ. ಉಪ್ಪುನೀರಿನ ಸಾಲ್ಟನ್ ಸರೋವರವಿರುವುದು ಇದರ ಮಧ್ಯಭಾಗದಲ್ಲಿ . ಇದರ ಆಗ್ನೇಯ ದಿಕ್ಕಿನಲ್ಲಿರುವ ಇಂಪೀರಿಯಲ್ ಕಣಿವೆಯ ಮಣ್ಣು ಬಹಳ ಫಲವತ್ತಾಗಿದ್ದು ನೀರಾವರಿಗಾಗಿ ಕಾಲೊರಾಡೋ ನದಿಯ ನೀರನ್ನು ಕಾಲುವೆಗಳ ಮೂಲಕ ಇಲ್ಲಿಗೆ ಒಯ್ಯಲಾಗುತ್ತದೆ. ಇದಕ್ಕೆ ಕಾಲೊರಾಡೋ ಮರುಳ್ಗಾಡೆಂಬ ಹೆಸರು ಬಂದಿರುವುದು ಇದರಿಂದಾಗಿ.

ಇಲ್ಲಿ ಆಗುವ ಮಳೆಯ ವಾರ್ಷಿಕ ಸರಾಸರಿ 3"-4". ಮಳೆ ವರ್ಷದಿಂದ ವರ್ಷಕ್ಕೆ ವ್ಯತ್ಯಾಸವಾಗುವುದುಂಟು. ಮೇ-ಸೆಪ್ಟೆಂಬರ್ ತಿಂಗಳುಗಳಲ್ಲಿ ಹಗಲಿನ ಉಷ್ಣತೆ 900 ಫ್ಯಾ. ಕೆಲವು ವೇಳೆ ಇದು 125 ಫ್ಯಾ.ವರೆಗೂ ಏರುವುದುಂಟು. ಇಲ್ಲಿ ಸಾಧಾರಣವಾಗಿ ಬೆಳೆಯುವ ಸಸ್ಯಗಳೆಂದರೆ ಕ್ರಿಯಾಸೋಟ್ ಕುರುಚಲು ಪೊದೆ.

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ